
ಮಲೆಯಮಾದಯ್ಯನ ಸಾಂಸ್ಕೃತಿಕ ಚರಿತ್ರೆ
ಶ್ರೀ ಮಲೆ ಮಹದೇಶ್ವರರ ಪರಂಪರೆ ಮತ್ತು ಜಾನಪದ ಚರಿತ್ರೆಯ ಕುರಿತ ಅಧ್ಯಯನ ಗ್ರಂಥದ ಆಯ್ದ ಪುಟಗಳು.
ಶ್ರೀ ಅಯ್ಯನ ಸರಗೂರು ಮಠ(ಶ್ರೀ ಮಲೆಮಹದೇಶ್ವರ ಸ್ವಾಮಿಯ ಎಣ್ಣೆಮಜ್ಜನ ಸೇವೆಯ ಮೂಲ ಮಠ)
ಶ್ರೀ ಮಲೆ ಮಹದೇಶ್ವರ ಸ್ವಾಮಿಯವರು ತಮ್ಮ ಎಣ್ಣೆಮಜ್ಜನಕ್ಕೆ ಒಕ್ಕಲು ಪಡೆಯಲು ಸರಗೂರೆಂಬ ಪುರವನ್ನು ಕಟ್ಟಿ, ಅಲ್ಲಿ ವಾಸವಿದ್ದ ದೈವಾಂಶ ಸಂಭೂತ ಕುಟುಂಬದ ಶ್ರೀ ಮೂಗಪ್ಪ ಸ್ವಾಮಿ (ಶಂಕರಪ್ರಿಯ) ಹಾಗೂ ಶಿವಶರಣೆ ರಾಮವ್ವ ತಾಯಿಯವರನ್ನು ತಮ್ಮ ಸೇವೆಗೆ ಪಡೆದರು. ಆ ಸೇವೆಯ ಮೂಲ ಮಠವೇ ಶ್ರೀ ಅಯ್ಯನ ಸರಗೂರು ಮಠ.



ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಬಿ.ಜಿ.ಪುರ ಹೋಬಳಿಯ ಸರಗೂರು ಗ್ರಾಮವು ಇತಿಹಾಸ ಪ್ರಸಿದ್ಧ ಸ್ಥಳವಾಗಿದ್ದು, ಶರಣರು ಜನಿಸಿದ ಪುಣ್ಯಭೂಮಿಯಾಗಿದೆ. ಈಶಾನ್ಯ ದಿಕ್ಕಿಗೆ ಐದು ಕಿಲೋಮೀಟರ್ ದೂರದಲ್ಲಿರುವ ಕುಂದೂರು ಬೆಟ್ಟದ ಶ್ರೀ ರಸಸಿದ್ಧೇಶ್ವರ, ದಕ್ಷಿಣ ದಿಕ್ಕಿನಲ್ಲಿ ಮೂರು ಕಿಲೋಮೀಟರ್ ದೂರದಲ್ಲಿರುವ ಮುಡುಕುತೊರೆಯ ಶ್ರೀ ಭ್ರಮರಾಂಬಾ ಸಹಿತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಗಜಾರಣ್ಯ ಕ್ಷೇತ್ರ ಹಾಗೂ ವಾಯವ್ಯ ದಿಕ್ಕಿನಲ್ಲಿ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಶ್ರೀ ವಡ್ಗಲ್ ರಂಗನಾಥಸ್ವಾಮಿ ಕ್ಷೇತ್ರಗಳ ಮಧ್ಯೆ ಇರುವ ಇತಿಹಾಸವುಳ್ಳ ಕ್ಷೇತ್ರ ಇದಾಗಿದೆ.
ಸರಗೂರು ಗ್ರಾಮದ ಮೂಲಪುರುಷರಾದ ಶ್ರೀ ಸರಗೂರಪ್ಪ ಮತ್ತು ಗೌರಮ್ಮ ದಂಪತಿಗಳ ಏಳು ಮಕ್ಕಳಲ್ಲಿ ಕೊನೆಯವರಾದ ಶ್ರೀ ಮೂಗಪ್ಪನವರು ಹುಟ್ಟುವಾಗಲೇ ಎದೆಯಲ್ಲಿ ದಿವ್ಯ ಪಂಚಕಳಸದೊಂದಿಗೆ ಜನಿಸಿದರು. ವೈಷ್ಣವ ಮತ್ತು ಶೈವ ಎರಡೂ ಪರಂಪರೆಯ ದೇವರುಗಳನ್ನು ಪೂಜಿಸುತ್ತಿದ್ದ ಏಕಮಾತ್ರ ಭಕ್ತರು ಇವರು.
ಇವರ ಭಕ್ತಿಯನ್ನು ಪರೀಕ್ಷಿಸಲು ಶ್ರೀ ಮಹದೇಶ್ವರರು ತಲಕಾಡಿನ ಬಳಿ ಇಡೀ ಭೂಮಿಯನ್ನು ತಕ್ಕಡಿಯ ಒಂದು ಬದಿಗೂ ಮೂಗಪ್ಪನವರನ್ನು ಇನ್ನೊಂದು ಬದಿಗೂ ಇಟ್ಟು ತೂಗಿದಾಗ, ಮೂಗಪ್ಪನವರೇ ತುಸು ಭಾರವಿದ್ದರು – ಅಂದಿನಿಂದ ಅವರು “ಭೂಮಿ ತೂಕದ ಮೂಗಪ್ಪ”. ಮುಂದೆ ಶಿವಶರಣೆ ರಾಮವ್ವನವರೊಂದಿಗೆ ಇಬ್ಬರೂ ಶ್ರೀ ಮಹದೇಶ್ವರರ ಎಣ್ಣೆಮಜ್ಜನ ಸೇವೆಗೆ ಒಕ್ಕಲಾದರು; ರಾಮವ್ವ ತಾಯಿಯ ಹಠದಿಂದಲೇ ಇಂದು ಹೆಣ್ಣುಮಕ್ಕಳೂ ಸಂಸಾರ ಸಮೇತ ಏಳುಮಲೆಗೆ ಬಂದು ದರ್ಶನ ಪಡೆಯುವಂತಾಯಿತು.
ಅಯ್ಯನಸರಗೂರಿನಲ್ಲಿ (ಅಯ್ಯನವರಹುಂಡಿಯಲ್ಲಿ) ಹೊಸದಾಗಿ ನಿರ್ಮಿಸಿರುವ ದೇವಾಲಯವನ್ನು ಸರಗೂರು ಹೊಸಮಠದ ಶ್ರೀ ಬಸವರಾಜೇಂದ್ರ ಸ್ವಾಮಿಗಳು, ಬೂವಳ್ಳಿ ಮಠದ ಶ್ರೀ ಶಿವಪ್ಪ ಸ್ವಾಮಿಗಳು ಹಾಗೂ ವಿದ್ವಾನ್ ಡಾ|| ದಯಾನಂದ ಅವರ ಅರ್ಚಕ ವೃಂದದವರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.
ಶರಣರ ಗದ್ದುಗೆಗಳು, ಮಜ್ಜನದ ಕೊಳ, ರಾಮವ್ವ ಕೊಳ ಹಾಗೂ ಮೂಗಪ್ಪನವರ ಕೊಳಗಳ ಜೀರ್ಣೋದ್ಧಾರ ಶ್ರೀಮಠದ ಮುಂದಿನ ಸಂಕಲ್ಪ.
ಪಾದಯಾತ್ರೆ, ದೇವಾಲಯ ಉದ್ಘಾಟನೆ, ವನಮಹೋತ್ಸವ ಮತ್ತು ಗುರುಗಳ ಸಾನ್ನಿಧ್ಯದ ಕ್ಷಣಗಳು.
ಶ್ರೀಮಠ ಮತ್ತು ಶ್ರೀ ಮಲೆ ಮಹದೇಶ್ವರರ ಪರಂಪರೆಯ ಕುರಿತ ಪುಸ್ತಕಗಳು, ಪತ್ರಿಕೆಗಳು ಮತ್ತು ಶಾಸನ ಸಂಪುಟಗಳು – ಉಚಿತವಾಗಿ ಓದಿ.

ಶ್ರೀ ಮಲೆ ಮಹದೇಶ್ವರರ ಪರಂಪರೆ ಮತ್ತು ಜಾನಪದ ಚರಿತ್ರೆಯ ಕುರಿತ ಅಧ್ಯಯನ ಗ್ರಂಥದ ಆಯ್ದ ಪುಟಗಳು.

ಮಹದೇಶ್ವರ ಬೆಟ್ಟದ ದೇವಸ್ಥಾನದ ವಿಶೇಷ ಧಾರ್ಮಿಕ ಪತ್ರಿಕೆ – ಶ್ರೀಮಠದ ಸೇವೆಯ ಉಲ್ಲೇಖವಿರುವ ದಾಖಲೆ.
ವೀರಬಲ್ಲಾಳರ ತಾಮ್ರ ಶಾಸನ ಹಾಗೂ ಮಹದೇಶ್ವರ ಬೆಟ್ಟದ ಉಲ್ಲೇಖ – ಮುದ್ರಿತ ಪುಟ 140–142.
ಅಯ್ಯನಸರಗೂರು ಮಠ, ಸರಗೂರು ಅಂಚೆ,
ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ – 571463